One nation one ration card | ಒಂದು ದೇಶ ಒಂದು ರೇಷನ್ ಕಾರ್ಡ್
ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಅತಿದೊಡ್ಡ ಹೆಜ್ಜೆಯೊಂದನ್ನು ನಮ್ಮ ಪ್ರಧಾನಿಗಳು ಇಟ್ಟಿದ್ದಾರೆ, ಮುಂದುವರೆಯುತ್ತಿರುವ ರಾಷ್ಟ್ರದಲ್ಲಿ ಒಂದು ಕ್ರಾಂತಿಕಾರಿ ನಡಿಗೆ ಇದಾಗಿದೆ, ನಮ್ಮ ಗ್ರಾಮ ಭಾರತದಲ್ಲಿ ವಲಸಸಿಗರೆ ಹೆಚ್ಚಾಗಿದ್ದಾರೆ. ಉದ್ಯೋಗದ ಕೊರತೆ ನೀಗಿಸಲು, ಹಳ್ಳಿಗಳಿಂದ ಬೇರೆ ಬೇರೆ ನಗರಗಳಿಗೆ ವಲಸೆ ಹೋಗುವ ಕಾರ್ಮಿಕರ ಸಂಖ್ಯೆ ಹೆತ್ತೆಚ್ಚವಾಗಿದೆ, ಈ ರೀತಿ ವಲಸೆ ಹೋಗುವ ಜನರಿಗೆ ಅವರಿರುವ ಪ್ರದೇಶದಲ್ಲಿ ರೇಷನ್ ತೆಗೆದುಕೊಳ್ಳುವುದು ಈ ಮುನ್ನ ಅಸಾಧ್ಯವಾಗಿತ್ತು. ಈಗ ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ one nation one ration card ಎಂಬ ಈ ಹೊಸ ಯೋಜನೆಯಿಂದ ವಲಸಿಗರು ಇನ್ನು ಮುಂದೆ ತಾವು ಇರುವ ಪ್ರದೇಶದಲ್ಲಿಯೆ ರೇಷನ್ ಪಡೆಯಬಹುದು, ಇದರಿಂದಾಗಿ ಹಸಿವಿನಿಂದ ಬಳಲುವ ಅದೆಷ್ಟೋ ಬಡಜೀವಗಳ ಹೊಟ್ಟೆ ತುಂಬಲಿದೆ.
ಈ ಪದ್ದತಿಯ ಮುಖ್ಯ ಉದ್ದೇಶ ಇಡೀ ದೇಶಕ್ಕೆ ಒಂದೇ ತರನಾದ ಅಹಾರ ಪರಿಕರಗಳನ್ನು ಒದಗಿಸುವುದು, ಹಾಗು ಹಸಿವು ಮುಕ್ತ ಭಾರತವನ್ನು ನಿರ್ಮಿಸುವುದಾಗಿದೆ. ಈ ಪದ್ದತಿ ಯಿಂದ ನಾವೆಲ್ಲರು ಒಂದೇ ಎಂಬ ಸಂಗತಿಯನ್ನು ಸಾರಿ ಹೇಳಬಹುದಾಗಿದೆ. ಇದರ ಜೊತೆಗೆ ಸರ್ಕಾರದಿಂದ ಬರುವ ಯಾವುದೇ ಸಹಾಯ, ಪಿಂಚಣಿ, ಯೋಜನೆಗಳನ್ನು ಈ ಮುಖಾಂತರ ನೇರವಾಗಿ ಜನರ ಕೈ ಸೇರುವ ಹಾಗೆ ಮಾಡಬಹುದು, ಹಾಗೂ ಸರಿಯಾದ ಫಲಾನುಭವಿಗಳಿಗೆ ಸರಿಯಾದ ಫಲ ಇದರಿಂದ ದೊರೆಯುತ್ತದೆ,
ಈ ಒಂದು ದೇಶ ಒಂದು ರೇಷನ್ ಕಾರ್ಡ್ ಜಾರಿಗೆತರಲು ಕೇಂದ್ರ ಸರ್ಕಾರದ ಮುಂದೆ ಅತಿದೊಡ್ಡ ಸವಾಲುಗಳಿವೆ.
ಭಾರತದ ಜನಸಂಖ್ಯೆಯು 130 ಕೋಟಿ ದಾಟಿದೆ, ಇಷ್ಟು ದೊಡ್ಡ ಜನಸಂಖ್ಯೆಯ ವಿವರಗಳನ್ನು ಒಂದುಕಡೆ ಒಟ್ಟಾಗಿ ಸೇರಿಸಬೇಕು, ಹಾಗೂ ಅದಕ್ಕೆ ಸಂಬಂಧಿಸಿದ ಕೆಲವೂಂದು ತಂತ್ರಾಂಶಗಳನ್ನು ತಯಾರಿಸಿ ನಿರ್ವಹಿಸುವ ಮಹತ್ತರವಾದ ಕಾರ್ಯ ಕೇಂದ್ರ ಸರ್ಕಾರದ ಮುಂದಿದೆ.
ಈ ಯೋಜನೆಗಾಗಿ ಬಹುದೊಡ್ಡ ಸಂಪನ್ಮೂಲವು ಬೇಕಾಗುತ್ತದೆ, ಹಣದ ಸಂಪನ್ಮೂಲ, ನುರಿತ ತಾಂತ್ರಿಕ ತಜ್ಞರ ಸಂಪನ್ಮೂಲ,..... ಇತ್ಯಾದಿಗಳ ಬಹುದೊಡ್ಡ ಸವಾಲು ಈ ಕಠಿಣ ಸಂದರ್ಭದಲ್ಲಿ ಸರ್ಕಾರದ ಮುಂದಿದೆ.
ಯೋಜನೆ ಜಾರಿಯಾದ ನಂತರ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಣೆಯ ಹೊಣೆಯಿದೆ
ಒಟ್ಟಾರೆ ನವ ಭಾರತದ ನಿರ್ಮಾಣಕ್ಕೆ ಈ ಯೋಜನೆಯು ಸಹಕಾರಿಯಾಗಿದೆ
Comments
Post a Comment