One nation one ration card | ಒಂದು ದೇಶ ಒಂದು ರೇಷನ್ ಕಾರ್ಡ್
ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಅತಿದೊಡ್ಡ ಹೆಜ್ಜೆಯೊಂದನ್ನು ನಮ್ಮ ಪ್ರಧಾನಿಗಳು ಇಟ್ಟಿದ್ದಾರೆ , ಮುಂದುವರೆಯುತ್ತಿರುವ ರಾಷ್ಟ್ರದಲ್ಲಿ ಒಂದು ಕ್ರಾಂತಿಕಾರಿ ನಡಿಗೆ ಇದಾಗಿದೆ , ನಮ್ಮ ಗ್ರಾಮ ಭಾರತದಲ್ಲಿ ವಲಸಸಿಗರೆ ಹೆಚ್ಚಾಗಿದ್ದಾರೆ . ಉದ್ಯೋಗದ ಕೊರತೆ ನೀಗಿಸಲು , ಹಳ್ಳಿಗಳಿಂದ ಬೇರೆ ಬೇರೆ ನಗರಗಳಿಗೆ ವಲಸೆ ಹೋಗುವ ಕಾರ್ಮಿಕರ ಸಂಖ್ಯೆ ಹೆತ್ತೆಚ್ಚವಾಗಿದೆ , ಈ ರೀತಿ ವಲಸೆ ಹೋಗುವ ಜನರಿಗೆ ಅವರಿರುವ ಪ್ರದೇಶದಲ್ಲಿ ರೇಷನ್ ತೆಗೆದುಕೊಳ್ಳುವುದು ಈ ಮುನ್ನ ಅಸಾಧ್ಯವಾಗಿತ್ತು . ಈಗ ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ one nation one ration card ಎಂಬ ಈ ಹೊಸ ಯೋಜನೆಯಿಂದ ವಲಸಿಗರು ಇನ್ನು ಮುಂದೆ ತಾವು ಇರುವ ಪ್ರದೇಶದಲ್ಲಿಯೆ ರೇಷನ್ ಪಡೆಯಬಹುದು , ಇದರಿಂದಾಗಿ ಹಸಿವಿನಿಂದ ಬಳಲುವ ಅದೆಷ್ಟೋ ಬಡಜೀವಗಳ ಹೊಟ್ಟೆ ತುಂಬಲಿದೆ . ಈ ಪದ್ದತಿಯ ಮುಖ್ಯ ಉದ್ದೇಶ ಇಡೀ ದೇಶಕ್ಕೆ ಒಂದೇ ತರನಾದ ಅಹಾರ ಪರಿಕರಗಳನ್ನು ಒದಗಿಸುವುದು , ಹಾಗು ಹಸಿವು ಮುಕ್ತ ಭಾರತವನ್ನು ನಿರ್ಮಿಸುವುದಾಗಿದೆ . ಈ ಪದ್ದತಿ ಯಿಂದ ನಾವೆಲ್ಲರು ಒಂದೇ ಎಂಬ ಸಂಗತಿಯನ್ನು ಸಾರಿ ಹೇಳಬಹುದಾಗಿದೆ . ಇದರ ಜೊತೆಗೆ ಸರ್ಕಾರದಿಂದ ಬರುವ ಯಾವುದೇ ಸಹಾಯ , ಪಿಂಚಣಿ , ಯೋಜನೆಗಳನ್ನು ಈ ಮುಖಾಂತರ ನೇರವಾಗಿ ಜನರ ಕೈ ಸೇರುವ ಹಾಗೆ ಮಾಡಬಹುದು , ಹಾ...