Education | ಶಿಕ್ಷಣ

Education

 

ಶಿಕ್ಷಣವೆಂಬುದು ಪ್ರಾಚೀನ ಕಾಲದಿಂದ ಹಿಡಿದು ಈಗಿನವರೆಗೂ ಮಾನವನಿಗೆ ಬೇಕಾಗಿರುವ ಮೂಲಭೂತ ಅವಶ್ಯಕತೆಯಾಗಿದೆ. ರಾಜರ ಕಾಲದಲ್ಲಿ ಶಿಕ್ಷಣಕ್ಕಾಗಿ ಗುರುಕುಲವನ್ನು ತೆರೆದರೆ ಈಗ ಶಾಲೆಯೆಂಬ ಜೈಲನ್ನು ತೆರೆಯುತ್ತಿದ್ದಾರೆ


ಶಿಕ್ಷಣ ಎಂದರೆ ಒಬ್ಬ ವಿದ್ಯಾರ್ಥಿಯ ಆಸಕ್ತಿಗೆ ಅನುಗುಣವಾಗಿ ತರಬೇತಿ ನೀಡುವುದು, ನಮ್ಮೂಳಗಿನ ಕಲೆಯನ್ನು ಹೊರತೆಗೆದು ಅದಕ್ಕನುಗುಣವಾಗಿ ಶಿಕ್ಷಣ ಕೊಟ್ಟು, ತಿದ್ದಿ ತಿಡಿ ಹೊಳಪನ್ನು ನೀಡಿ ಒಬ್ಬ ಕಲಾಮೂರ್ತಿಯನ್ನಾಗಿ ಮಾಡುವುದು. ಕೆಲಸವನ್ನು ಆಗಿನ ಗುರುಕುಲಗಳಲ್ಲಿ ಮಾಡುತ್ತಿದ್ದರು. ಆದರೆ ಅಧುನಿಕಯುಗದ ಶಾಲೆಗಳಲ್ಲಿ ವಿದ್ಯಾರ್ಥಿಯ ಆಸಕ್ತಿ ಗುರುತಿಸುವ ಕೆಲಸವಾಗುತ್ತಿಲ್ಲ ಎಲ್ಲರಿಗೂ ಒಂದು ತೆರನಾದ ಶೈಕ್ಷಣಿಕ ಪದ್ದತಿಯಲ್ಲಿ ಕಲಿಸುವಿಕೆಯ ಕಾರ್ಯ ನಡೆಯುತಿದೆ. ಆಸಕ್ತಿಯನ್ನೆ ಗುರುತಿಸಲಾಗದ ಶಾಲೆಗಳು ಇನ್ನೆಲ್ಲಿ ಕಲೆಗೆ ಪ್ರೋತ್ಸಾಹ ನೀಡುವುದು, ಅಧುನಿಕ ಯುಗದ ಶಿಕ್ಷಣದಲ್ಲಿ ಬೆಲೆ ಇರುವುದು ಕೇವಲ ಅಂಕಗಳಿಗೆ ಮಾತ್ರ


ಅಂಕಗಳೆ ಎಲ್ಲವೂ ಎಂದು ಪರಿಬಾವಿಸಿರುವ ಸಮಾಜದಲ್ಲಿ ಅಂಕಗಳಿಸಿದರೆ ಮಾತ್ರ ವಿದ್ಯಾವಂತ ನೆಂತಲು ಇಲ್ಲವಾದಲ್ಲಿ ದಡ್ಡನೆಂತಲು ಗುರುತಿಸಲಾಗುತ್ತದೆ. ಆದರೆ ದಡ್ಡನ ಒಳಗಿರುವ ಆಸಕ್ತಿ, ಕಲೆಯನ್ನು ನೋಡಿ ಪ್ರೋತ್ಸಾಹಿಸುವ ತಂದೆ ತಾಯಿಯ ಕೊರತೆ ಸಮಾಜದಲ್ಲಿ ಎದ್ದು ಕಾಣುತ್ತಿದೆ. ಇದು ಕೇವಲ ಪೋಷಕರ ತಪ್ಪಲ್ಲ ಸಮಾಜದ ತಪ್ಪು ಅಂಕವಿದ್ರೆ ಮಾತ್ರ ಕೆಲಸ, ಸ್ಥಾನಮಾನ ಗೌರವ ಸನ್ಮಾನ  ಇಲ್ಲವಾದಲ್ಲಿ ದಡ್ಡನೆಂದು ವ್ಯಕ್ತಿಯನ್ನು ಮಾನಸಿಕವಾಗಿ ಹಿಂಸೆ ನೀಡಿ ಕುಗ್ಗಿಸಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳವುಂತೆ ಮಾಡುತ್ತಿರುವುದು ಸಮಾಜ.

ಎಲ್ಲರು ಶಿಕ್ಷಣಪಡೆದು ಹೆಚ್ಚಿನ ಅಂಕಗಳಿಸಿ ಉನ್ನತ ಉದ್ಯೋಗ ಪಡೆದು, ಹೆಚ್ಚಿನ ಸಂಪಾದನೆ ಮಾಡಬೇಕು ಎಂಬುದು ಕಾಲದ ಶೈಕ್ಷಣಿಕ ಸಿದ್ಧಾಂತವಾಗಿದೆ. ಒಂದು ವೇಳೆ ಸಿದ್ದಾಂತ ವೇ ನಿಜವಾದರೆ ರೈತನ ಕೆಲಸ ಮಾಡುವವರು ಯಾರು?, ಕರ ಕುಶಲತೆಯ ಕಾರ್ಯ ನಿರ್ವಹಿಸುವವರು ಯಾರು ? ಶಿಕ್ಷಣದ ಹೊರತ್ತಾಗಿನ ಕೆಲಸ ಮಾಡುವವರು ಯಾರು

ಶಿಕ್ಷಣವೆಂಬುದು ಜ್ಞಾನರ್ಜಾನೆಗಾಗಿ, ನಮ್ಮೂಳಗಿನ ಕಲೆಯ ಹೊಳಪಿಗಾಗಿ ಇರಬೇಕೆ ವಿನಃ ಅಂಕಗಳಿಗಾಗಿ ಮಾತ್ರ ಶಿಕ್ಷಣವಿರಬಾರದು.


ನಮ್ಮ ಮನೋಭಿಲಾಷೆಗೆ ಅನುಗುಣವಾಗಿ ನಮ್ಮ ಗುರಿಸಾಧನೆಗೆ ಅವಶ್ಯಕ ರೂಪದಲ್ಲಿ ಶಿಕ್ಷಣ ವಿರಕಬೇಕು, ಆದರೆ ಈಗ ಮನದ ಆಸಕ್ತಿಯನ್ನು ಮನದಲ್ಲಿಯೇ ಸಾಯಿಸಿ ಮತ್ತೆನನ್ನೊ ಆಗುವ ದೆಸೆಯಲ್ಲಿ ಶಿಕ್ಷಣವಿದೆ. ಒಬ್ಬ ಅತ್ಯುತ್ತಮವಾಗಿ ಮಾತನಾಡಬಲ್ಲ ವಾಗ್ಮಿಯನ್ನು ಡಾಕ್ಟರ್ ನನ್ನಾಗಿ, ಕನ್ನಡದಲ್ಲಿ ಕಥೆ ಕವನ ಬರೆಯುವವನನ್ನು ಇಂಜಿನಿಯರ್ ನನ್ನಾಗಿ ಮಾಡುತ್ತಿರುವುದು ನಮ್ಮ ಶಿಕ್ಷಣ. ಆದರ ಬದಲಾಗಿ ನಮ್ಮೂಳಗಿನ ಕಲೆ ಗುರುತಿಸಿ ಅದಕ್ಕನುಗುಣವಾಗಿ ಶಿಕ್ಷಣ ನೀಡಿದರೆ ನಮ್ಮಲ್ಲಿ ಮತ್ತೊಬ್ಬ ಕುವೆಂಪು, ರಾಜ್ ಕುಮಾರ್, ಸಚಿನ್ ತೆಂಡೂಲ್ಕರ್, ಮುತ್ತಾಂದ ಮಹಾನ್ ಸಧಾಕರನ್ನು ನೋಡಬಹುದು

ಶಿಕ್ಷಣವೆಂಬುದು ಕಲೆ, ಪ್ರತಿಭೆ, ಆಸಕ್ತಿ, ಬದುಕಿನ ಕಲೆಯನ್ನು ಕಲೆಸಬೇಕೆ ವಿನಃ ಅಂಕಗಳಿಗೆ ಮಾತ್ರ ಸೀಮಿತವಾಗಬಾರದು

   ಧನ್ಯವಾದಗಳು 


Author :  Shashanka H S

Comments

Popular posts from this blog

How to find out scammers in online (dating application)

IS ONLINE EDUCATION EFFECTIVE?

Education